ಎಲುಬುವಿಜ್ಞಾನ: ಮೂಳೆಗಳ, ಎಲುಗಟ್ಟಿನ (ಸ್ಕೆಲಿಟನ್), ಒಟ್ಟಾರೆ ಇಲ್ಲವೆ ಬಿಡಿ ಬಿಡಿಯಾಗಿ ಅತ್ಯಂತ ಸೂಕ್ಷ್ಮ ರಚನೆಯಿಂದ ಕಣ್ಣಿಗೆ ಕಾಣಿಸುವ ರಚನೆಯನ್ನು ಅಭ್ಯಸಿಸುವ ಅಂಗರಚನಾವಿಜ್ಞಾನದ ವಿಭಾಗಕ್ಕೆ (ಆಸ್ಟಿಯಾಲಜಿ) ಎನ್ನುತ್ತಾರೆ. ಇಲ್ಲಿ ಮುಖ್ಯವಾಗಿ ಮೂಳೆಗಳ ರೂಪ, ಆಕಾರ, ಗಾತ್ರ, ಬೆಳೆವಣಿಗೆಯ ಕ್ರಮ, ಇತರ ಊತಕಗಳೊಂದಿಗಿರುವ ಸಂಬಂಧ, ನಿಜಗೆಲಸಗಳನ್ನು ವಿವರಿಸಲಾಗಿದೆ (ನೋಡಿ- ಎಲುಬು; ಎಲುಗಟ್ಟು,-ಕಶೇರುಕಗಳು).	(ಡಿ.ಎಸ್.ಎಸ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ